Wednesday, October 6, 2010

ನಾಗರೀಕ ಪೊಲೀಸ್ ಕಾನ್ಸ್ಟೇಬಲ್ ಲಿಖಿತ ಪರೀಕ್ಷೆ - 2010

ಪೂರ್ವ ದೇಶಗಳ ಪವಿತ್ರ ಗ್ರಂಥಗಳು (ಸೇಕ್ರೆಡ್ ಬುಕ್ ಆಫ್ ದಿ ಈಸ್ಟ್) ಬರೆದಂತಹ ಜರ್ಮನ್ ವಿದ್ವಾಂಸನ ಹೆಸರೇನು?
ಎ) ಮ್ಯಾಕ್ಸ್ ಮುಲ್ಲರ್,  ಬಿ) ವಿಲಿಯಂ ಶೇಕ್ಸ್ ಪಿಯರ್, ಸಿ) ಕಾರ್ಲ್ಮಾರ್ಕ್ಸ್ ಡಿ) ಮ್ಯಾಕ್ಸ್ ವೆಬರ್

ಸಂಪ್ರದಾಯದ ಪ್ರಕಾರ ಮುಖ್ಯವಾದ ಪುರಾಣಗಳೆಷ್ಟು
ಎ) 12,  ಬಿ) 14,  ಸಿ) 16,  ಡಿ) 18

ಇವುಗಳಲ್ಲಿ ಯಾವುದು ಕಾಳಿದಾಸ ರಚಿತ ಕೃತಿಯಲ್ಲ
ಎ) ಅಭಿಜ್ಞಾನ ಶಾಕುಂತಲಮ್,  ಬಿ) ಸ್ವಪ್ನ ವಾಸವದತ್ತಂ, ಸಿ) ರಘುವಂಶಮ್,  ಡಿ) ವಿಕ್ರಮೋರ್ವಶೀಯಮ್

ಏ ಎಂಬಾತನು ಅಂಕಗಣಿತದಲ್ಲಿ ಪಡೆದ ಅಂಕಗಳಲ್ಲಿ ಮೂರನೇ ಒಂದು ಭಾಗವು ಆತನು ಆಂಗ್ಲಭಾಷೆಯಲ್ಲಿ ಪಡೆದ ಅಂಕಗಳ ಅರ್ಧದಷ್ಟಕ್ಕೆ ಸಮಾನವಾಗಿದೆ.  ಒಂದು ವೇಳೆ ಈ ಎರಡೂ ವಿಷಯಗಳಲ್ಲಿ ಆತನು ಗಳಿಸಿದ ಒಟ್ಟು ಅಂಕಗಳು 150 ಆಗಿದ್ದಲ್ಲಿ ಆತನು ಆಂಗ್ಲಭಾಷೆಯಲ್ಲಿ ಪಡೆದ ಅಂಕಗಳೆಷ್ಟು
ಎ) 90,  ಬಿ) 60,  ಸಿ) 30,  ಡಿ) 80

ಅಕೌಸ್ಟಿಕ್ಸ್ ಈ ಪದವು ಈ ಕೆಳಗಿನವುಗಳಲ್ಲಿ ಯಾವುದಕ್ಕೆ ಸಂಬಂದಿಸಿದೆ
ಎ) ಅಕೌಂಟ್ಸ್,  ಬಿ) ಭೌತಶಾಸ್ತ್ರ,  ಸಿ) ಶಬ್ದ, ಡಿ) ವಿದ್ಯುಚ್ಛಕ್ತಿ

ಭಾರತದ ಮೇಲೆ ಬಾಬರನು ಆಕ್ರಮಣವೆಸಗಿದಾಗ ದೆಹಲಿಯಲ್ಲಿ ಯಾವ ಅರಸೊತ್ತಿಗೆಯ ಆಳ್ವಿಕೆ ಇತ್ತು
ಎ) ಗುಲಾಮ,  ಬಿ) ಖಿಲ್ಜಿ,  ಸಿ) ಲೋಧಿ, ಡಿ) ತುಘಲಕ್

ಚುಚ್ಚುಮದ್ದಿನ  (ವ್ಯಾಕ್ಸಿನೇಶನ್) ಮೂಲಕ ಸಿಡುಬನ್ನು ತಡೆಗಟ್ಟಬಹುದೆಂದು ಕಂಡುಹಿಡಿದವರು ಯಾರು
ಎ) ಎಡ್ವರ್ಡ್ ಜನ್ನರ್,  ಬಿ) ಲೂಯಿಪಾಶ್ವರ್, ಸಿ) ಜೋಸೆಫ್ ಲಿಸ್ಟರ್,  ಡಿ) ಅಲೆಗ್ಸಾಂಡರ್ ಫ್ಲೆಮಿಂಗ್

ಸಂವಿಧಾನದ ನಿರ್ದೇಶಕ ತತ್ವಗಳಿಗೆ ಸಂಬಂಧಿಸಿದಂತೆ ಇವುಗಳಲ್ಲಿ ಯಾವುದು ನಿಜವಲ್ಲ
ಎ) ಭಾರತದ ಸಂವಿಧಾನದ ಭಾಗ 4 ರಲ್ಲಿ ಅಳವಡಿಸಿದೆ,  ಬಿ) ಐರ್ಲೆಂಡಿನ ಸಂವಿಧಾನದಿಂದ ಪ್ರೇರಣೆ ಪಡೆದಿದೆ,  ಸಿ) ನ್ಯಾಯಾಂಗದ ಮೂಲಕ ಸಮರ್ಥಿಸಲಾಗದ ಜನರ (ನಾಗರೀಕರ) ಹಕ್ಕುಗಳೆಂದು ತಿಳಿಯಲಾಗಿದೆ,  ಡಿ) ರಚನೆಯ ನಂತರ ಅವುಗಳನ್ನು ತಿದ್ದುಪಡಿಮಾಡಲಾಗಿಲ್ಲ.

ಇವುಗಳಲ್ಲಿ ಯಾವುದು ಪಂಚಾಯತಿ ರಾಜ್ ಸಂಸ್ಥೆಯಲ್ಲ
ಎ) ಗ್ರಾಮ ಸಭಾ,  ಬಿ) ಗ್ರಾಮ ಪಂಚಾಯತ್,  ಸಿ) ನ್ಯಾಯ ಪಂಚಾಯತ್,  ಡಿ) ಗ್ರಾಮ ಸಹಕಾರ ಸಂಘ

2012ರ ಒಲಂಪಿಕ್ ಕ್ರೀಡಾಕೂಟವನ್ನು ನೆಡೆಸಲು ನಿರ್ಧರಿಸಲಾಗಿರುವ ಸ್ಥಳ ಯಾವುದು
ಎ) ಲಂಡನ್,  ಬಿ) ದೆಹಲಿ,  ಸಿ) ಬೀಜಿಂಗ್, ಡಿ) ಪ್ಯಾರಿಸ್

ಯಾವ ದಿನದಂದು ವಿಶ್ವ ಏಡ್ಸ್ ದಿನ ಆಚರಿಸಲಾಗುವುದು
ಎ) 8ನೇ ಅಕ್ಟೋಬರ್,  ಬಿ) 2ನೇ ಏಪ್ರಿಲ್,  ಸಿ) 1ನೇ ಡಿಸೆಂಬರ್,  ಡಿ) 14ನೇ ಫೆಬ್ರವರಿ

ಒಂದು ವೇಳೆ 10 ಸಂಖ್ಯೆಯ ವಸ್ತುಗಳ ಮೂಲ ಬೆಲೆಯು 9 ಸಂಖ್ಯೆಯ ವಸ್ತುಗಳ ಮಾರಾಟ ಬೆಲೆಗೆ ಸಮಾನವಾಗಿದ್ದಲ್ಲಿ ದೊರಕುವ ಲಾಭ 
ಎ) 12%,  ಬಿ) 10%  ಸಿ) 9 1/11%  ಡಿ) 11 1/9%

ಇವರಲ್ಲಿ ಯಾರನ್ನು ಏಷ್ಯಾದ ಬೆಳಕು ಎಂದು ಕರೆಯುತ್ತಾರೆ
ಎ) ಮದರ್ ತೆರೆಸಾ,  ಬಿ) ಮಹಾವೀರ,  ಸಿ) ಕನ್ ಫ್ಯೂಷಿಯಸ್,  ಡಿ) ಗೌತಮ ಬುದ್ಧ

ಎನ್.ಸಿ.ಇ.ಆರ್.ಟಿ. ಇದರ ವಿಸ್ತೃತ ರೂಪ
ಎ) ನ್ಯಾಶನಲ್ ಕೌನ್ಸಿಲ್ ಆಫ್ ಎನ್ವೈರಾನಮೆಂಟ್ ರಿಸರ್ಚ್ ಅಂಡ್ ಟ್ರೈನಿಂಗ್,  ಬಿ) ನ್ಯಾಶನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರೀಸರ್ಚ್ ಅಂಡ್ ಟ್ರೈನಿಂಗ್, ಸಿ) ನ್ಯಾಶನಲ್ ಕೌನ್ಸಿಲ್ ಆಪ್ ಇಕಾಲಾಜಿಕಲ್ ರಿಸರ್ಚ್ ಅಂಡ್ ಟ್ರೈನಿಂಗ್,  ಡಿ) ನ್ಯಾಶನಲ್
ಕೌನ್ಸಿಲ್ ಆಫ್ ಎಲೆಕ್ಟ್ರಾನಿಕ್ ರಿಸರ್ಚ್ ಅಂಡ್ ಟ್ರೈನಿಂಗ್

ಇವರಲ್ಲಿ ಯಾವು 20 ನೇ ಶತಮಾನದಲ್ಲಿ ಬದುಕಿದ್ದ ಭಾರತದ ಮಹಾನ್ ಗಣಿತಜ್ಞ
ಎ) ಸರ್.ಸಿ.ವಿ.ರಾಮನ್,   ಬಿ) ಶ್ರೀನಿವಾಸ ರಾಮಾನುಜಂ,  ಸಿ) ಚಂದ್ರಶೇಖರ ಸುಬ್ರಮಣ್ಯಂ,  ಡಿ) ಜಯಂತ ನಾರ್ಳೀಕರ್

400ರಕ್ಕೆ ಬಳಸುವ ರೋಮನ್ ಸಂಖ್ಯಾ ವಾಚಕ ಯಾವುದು
ಎ) DC,  ಬಿ) CD,  ಸಿ) CM, ಡಿ) MC

ಕ್ರಿಕೇಟ್ ಅಂಗಳದ ಪಿಚ್ ಉದ್ದವೆಷ್ಟು
ಎ) 21 ಗಜಗಳು,  ಬಿ) 20 ಗಜಗಳು,  ಸಿ) 22 ಗಜಗಳು,  ಡಿ) 25 ಗಜಗಳು

ಇವುಗಳಲ್ಲಿ ಯಾವುದರೊಂದಿಗೆ ಡಾ|| ಪ್ರಮೋದ್ ಕರಣ್ ಸೇಠಿ ಗುರುತಿಸಲ್ಪಡುತ್ತಾರೆ
ಎ) ಜಯಪುರ ಕಾಲು,  ಬಿ) ಹೃದಯದ ಶಸ್ತ್ರಚಿಕಿತ್ಸೆ, ಸಿ) ಭೌತ ಶಾಸ್ತ್ರ,  ಡಿ) ನರವಿಜ್ಞಾನ

ಸಂಕೇತ ಭಾಷೆಯಲ್ಲಿ APPEAR ಎನ್ನುವ ಪದವನ್ನು PAEPRA ಎಂದು ಬರೆಯಲಾಗಿದ್ದರೆ ಆಗ PROVIDENCE ಎನ್ನುವ ಪದವನ್ನು  ಹೇಗೆ ಬರೆಯಬೇಕಾಗುವುದು
ಎ) PORIVEDCNE,  ಬಿ) RPOVPINECE,  ಸಿ) RPVODINEECಡಿ) EORIVEDCEP

ಮಹಾಭಾರತದ ಮಹಾಕಾವ್ಯದಲ್ಲಿ ಭೀಷ್ಮನ ಮುಂಚಿನ ಹೆಸರೇನಾಗಿತ್ತು
ಎ) ದೇವದತ್ತ,  ಬಿ) ದೇವವ್ರತ,  ಸಿ) ದೇವಸಿಂಹ, ಡಿ) ದೇವವರ್ಮ

ಭಾರತದಲ್ಲೇ ತಯಾರಾದ ಭಾರತದ ಪ್ರಮುಖ ಯುದ್ಧ ಟ್ಯಾಂಕಿನ ಹೆಸರು
ಎ) ಭೀಮ,  ಬಿ) ಪೃಥ್ವಿ,  ಸಿ) ಅರ್ಜುನ್,  ಡಿ) ಬ್ರಹ್ಮೋಸ್

ಈ ಕೆಳಗಿನವರಲ್ಲಿ ಯಾರು ಖ್ಯಾತ ಯಕ್ಷಗಾನ ಕಲಾವಿದರು
ಎ) ಕಯ್ಯಾರ ಕಿಇ್ಇಣ್ಣರೈ ಬಿ) ಕೆರೆಮನೆ ಶಂಭುಹೆಗಡೆ, ಸಿ) ಪ್ರಕಾಶ ರೈ,  ಡಿ) ಗುರುಕಿರಣ

ಕರ್ನಾಟಕದ ಜನಪ್ರಿಯ ಜಾನಪದ ನೃತ್ಯಶೈಲಿಯ ಡೊಳ್ಳು ಕುಣಿತವನ್ನು ಯಾವ ದೇವತೆಯ ಸುತ್ತ ಹೆಣೆಯಲಾಗಿದೆ
ಎ) ಭಗವಾನ್ ವಿಷ್ಣು,  ಬಿ) ಬೀರೇಶ್ವರ,  ಸಿ) ಮಾರಮ್ಮ,  ಡಿ) ಅಣ್ಣಮ್ಮ

ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರು ಯಾರು
ಎ) ಸರ್. ಎಂ.ವಿಶ್ವೇಶ್ವರಯ್ಯ,  ಬಿ) ಬಿ.ಎಂ.ಶ್ರೀಕಂಠಯ್ಯ,  ಸಿ) ಎಚ್.ವಿ.ನಂಜುಂಡಯ್ಯ,  ಡಿ) ಕೆ.ಶ್ರೀನಿವಾಸರಾವ್

ಈ ಕೆಳಗಿನವುಗಳಲ್ಲಿ ಯಾವುದಕ್ಕೆ ಪಾಡ್ದನಗಳು ಸಂಬಂಧಿಸಿವೆ
ಎ) ಕೊಡಗಿನ ವಿಶಿಷ್ಟ ಆಹಾರದ ಬಗೆ,  ಬಿ) ಕರಾವಳಿ ಕರ್ನಾಟಕದ ನೃತ್ಯದ ವಿಧ,  ಸಿ) ತುಳುಭಾಷೆಯ ಮಹಾಕಾವ್ಯದ ಮೌಖಿಕ ರೂಪ,  ಡಿ) ಒಂದು ಜನಪ್ರಿಯ ವಚನ

ಮರದ ವಯಸ್ಸನ್ನು ಈ ಕೆಳಗೆ ಕಾಣಿಸಿದ ಯಾವುದರಿಂದ ನಿರ್ಧರಿಸಬಹುದು
ಎ) ಅದರ ಎತ್ತರವನ್ನು ಅಳೆಯುವುದರಿಂದ  ಬಿ) ಅದರ ವ್ಯಾಸವನ್ನು ಅಳೆಯುವುದರಿಂದ  ಸಿ) ಅದರ ಒಳತಿರುಳನ್ನು ವಿಶ್ಲೇಸುವುದರಿಂದ,  ಡಿ) ಅದರ ಕಾಂಡದ ವಾರ್ಷಿಕ ಬೆಳವಣಿಗೆ ಸುರುಳಿಗಳನ್ನು ಎಣಿಸುವುದರಿಂದ

ಭಾರತದ ರಾಜ್ಯವೊಂದರ ಪ್ರಥಮ ಮಹಿಳಾ ಮುಖ್ಯಮಂತ್ರಿ ಯಾರೆಂದು ಹೆಸರಿಸಿ
ಎ) ಸುಚೇತಾ ಕೃಪಲಾನಿ,  ಬಿ) ಸರೋಜಿನಿ ನಾಯ್ಡು, ಸಿ) ನಂದಿನಿ ಸತ್ಪತಿ,  ಡಿ) ಮಾಯಾವತಿ

ಇವುಗಳಲ್ಲಿ ಯಾವುದನ್ನು ಭೂಕಂಪವೊಂದರ ಮೂಲ ಬಿಂದುವೆಂದು ಕರೆಯಲಾಗುತ್ತದೆ
ಎ) ಎಪಿಸೆಂಟರ್,  ಬಿ) ಸಿಸ್ಮಿಕ್ ಫೋಕಸ್,  ಸಿ) ಕ್ವೇಕ್ ಸೆಂಟರ್,  ಡಿ) ಟೆಕ್ಟೋನಿಕ್ ಪಾಯಿಂಟ್

ಇವುಗಳಲ್ಲಿ ಯಾವುದು ಮಂಡಲ್ ಆಯೋಗದ ವರದಿಯಲ್ಲಿ ಪ್ರಮುಖ ಶೀಫಾರಸ್ಸುಗಳಲ್ಲೊಂದಾಗಿದೆ
ಎ) ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ,  ಬಿ) ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ,  ಸಿ) ಚುನಾವಣಾ ಸುಧಾರಣೆಗಳು,  ಡಿ) ಶೈಕ್ಷಣಿಕ ಸುಧಾರಣೆಗಳು

ಈಗಿನ ಮುಖ್ಯ ಚುನಾವಣಾ ಆಯುಕ್ತರು ಯಾರು
ಎ) ನವೀನ್ ಚಾವ್ಲಾ,  ಬಿ) ಎಸ್.ವೈ.ಖುರೇಷಿ,  ಸಿ) ಎನ್.ಗೋಪಾಲಸ್ವಾಮಿ,  ಡಿ) ಸುದಾಕರ ರಾವ್,

ಸರ್ವದರ್ಶನ ಸಂಗ್ರಹ ಈ ಕೃತಿಯ ಕರ್ತೃ
ಎ) ಸಾಯಣ,  ಬಿ) ಕುಮಾರವ್ಯಾಸ,  ಸಿ) ರತ್ನಾಕರವರ್ಣಿ,  ಡಿ) ವಿದ್ಯಾರಣ್ಯ

ಬಸವೇಶ್ವರರು ಅನುಭವ ಮಂಟಪವನ್ನು ಸ್ಥಾಪಿಸಿದ ಸ್ಥಳ
ಎ) ಕೂಡಲ ಸಂಗಮ,  ಬಿ) ಬಸವನ ಬಾಗೇವಾಡಿ,  ಸಿ) ಬಸವ ಕಲ್ಯಾಣ,  ಡಿ) ನಂದಿಕೇಶ್ವರ

ಮೋಹನ ತರಂಗಿಣಿ ಕೃತಿ ರಚಿಸಿದವರು
ಎ) ಪುರಂದರದಾಸರು,  ಬಿ) ಕನಕದಾಸರು,  ಸಿ) ತುಕಾರಮ,  ಡಿ) ಜಯದೇವ

ಇವರಲ್ಲಿ ಯಾರ ಕಾಲಘಟ್ಟಕ್ಕೆ ಮಯೂರ ಸಿಂಹಾಸನ ಸೇರಿದೆ
ಎ) ಜಹಂಗೀರ್,  ಬಿ) ಶಹಜಹಾನ್,  ಸಿ) ಅಕ್ಬರ್,  ಡಿ) ಔರಂಗಜೇಬ್

ಸಂಸ್ಕೃತ ಕೃತಿ 'ಲೀಲಾವತಿ' ಯಾವ ವಿಷಯಕ್ಕೆ ಸಂಬಂಧಿಸಿದೆ
ಎ) ತಂತ್ರಜ್ಞಾನ,  ಬಿ) ಗಣಿತಶಾಸ್ತ್ರ,  ಸಿ) ವಿಜ್ಞಾನ,  ಡಿ) ವೈದ್ಯಕೀಯ ಶಾಸ್ತ್ರ

ಎಲ್ಲ ಆಮ್ಲಗಳಿಗೂ ಸಾಮಾನ್ಯವಾಗಿರುವ ಮೂಲವಸ್ತು
ಎ) ಇಂಗಾಲ,  ಬಿ) ಜಲಜನಕ,  ಸಿ) ಆಮ್ಲಜನಕ,  ಡಿ) ಗಂಧಕ

ಈ ಕೆಳಗಿನ ಮೊಘಲ್ ದೊರೆಗಳಲ್ಲಿ ಯಾರು ಅನಕ್ಷರಸ್ಥ ಎಂದು ತಿಳಿಯಲಾಗಿದೆ
ಎ) ಬಾಬರ್,  ಬಿ) ಹುಮಾಯೂನ್,  ಸಿ) ಅಕ್ಬರ್,  ಡಿ) ಜಹಾಂಗೀರ್

ಹಿಜ್ರಾ ಶಕವನ್ನು ಯಾವಾಗಿನಿಂದ ಪರಿಗಣಿಸಲಾಗುತ್ತದೆ
ಎ) ಕ್ರಿ.ಶ.632,  ಬಿ) ಕ್ರಿ.ಶ.712,  ಸಿ) ಕ್ರಿ.ಶ.722,  ಡಿ) ಕ್ರಿ.ಶ.622

ಇವುಗಳಲ್ಲಿ ಯಾವುದನ್ನು ಸಂವಿಧಾನದ ಕೇಂದ್ರಪಟ್ಟಿಯು ಒಳಗೊಂಡಿಲ್ಲ
ಎ) ಅರಣ್ಯ,  ಬಿ) ರಕ್ಷಣೆ,  ಸಿ) ಅರ್ಥ,  ಡಿ) ರೈಲ್ವೆ

ಯಾವ ದಿನದಂದು ಸಂವಿಧಾನಿಕ ಸಭೆಯು ಭಾರತ ಸಂವಿಧಾನವನ್ನು ಒಪ್ಪಿತು (ಅಂಗೀಕರಿಸಿತು)
ಎ) 18-08-1947,  ಬಿ) 26-01-1950,  ಸಿ) 9-12-1946,  ಡಿ) 26-11-1949

ಯಾವ ಕ್ರೀಡೆಯಲ್ಲಿ ಸಾಧನೆಗಾಗಿ ಅರ್ಜುನ್ ಅತ್ವಾಲ್ ಖ್ಯಾತರಾಗಿದ್ದಾರೆ
ಎ) ಟೆನ್ನಿಸ್,  ಬಿ) ಚೆಸ್,  ಸಿ) ಗಾಲ್ಫ್,  ಡಿ) ಸ್ನೂಕರ್

ಯಾವ ನದಿಗೆ ಹಿರಾಕುಡ್ ಅಣೆಕಟ್ಟನ್ನು ಕಟ್ಟಲಾಗಿದೆ
ಎ) ನರ್ಮದಾ,  ಬಿ) ಮಹಾನದಿ,  ಸಿ) ಗೋದಾವರಿ,  ಡಿ) ಕೃಷ್ಣಾ

ಯಾವ ಪಂಚವಾರ್ಷಿಕ ಯೋಜನೆಯಲ್ಲಿ ಔದ್ಯಾಗಿಕ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ
ಎ) ಎರಡನೇ ಪಂಚೆವಾರ್ಷಿಕ ಯೋಜನೆ,  ಬಿ) ಮೂರನೆ ಪಂಚವಾರ್ಷಿಕ ಯೋಜನೆ,  ಸಿ) ನಾಲ್ಕನೇ ಪಂಚವಾರ್ಷಿಕ ಯೋಜನೆ,  ಡಿ) ಆರನೆ ಪಂಚವಾರ್ಷಿಕ ಯೋಜನೆ

ಗಂಟೆಗೆ 30 ಮೈಲಿ ವೇಗದಲ್ಲಿ ಓಡುತ್ತಿರುವ ರಯಲೊಂದು ಗಂಟೆಗೆ 50 ಮೈಲಿ ವೇಗದಲ್ಲಿ ಓಡುತ್ತಿರುವ ರೈಲಿಗಿಂತ ಮುಂದೆಯಿದೆ.  ಇವುಗಳಲ್ಲಿ ವೇಗವಾಗಿ ಓಡುತ್ತಿರುವ ರೈಲಿಗೆ ನಿಧಾನವಾಗಿ ಓಡುತ್ತಿರುವ ರೈಲನ್ನು ಹಿಡಿಯಲು ಒಂದು ವೇಳೆ 15 ನಿಮಿಷಗಳು ಬೇಕಾಗುವುದಾದರೆ ಅವೆರಡೂ ರೈಲುಗಳು ಪರಸ್ಪರ ಎಷ್ಟು ದೂರದಲ್ಲಿವೆ
ಎ) 5 ಮೈಲಿ,  ಬಿ) 20 ಮೈಲಿ,  ಸಿ) 10 ಮೈಲಿ,  ಡಿ) 15 ಮೈಲಿ

ಜವಾಹರ್ ರೋಜ್ಗಾರ್ ಯೋಜನೆಯ ಉದ್ದೇಶ
ಎ) ಗ್ರಾಮೀಣ ಜನರಿಗೆ ವಸತಿಗಳನ್ನು ಕಲ್ಪಿಸುವುದು,  ಬಿ) ಮಕ್ಕಳಿಗೆ ಶಿಕ್ಷಣ ಕಲ್ಪಿಸುವುದು,  ಸಿ) ಗ್ರಾಮೀಣ ಜನರಿಗೆ ಕೆಲಸ ದೊರೆಯುವಂತೆ ಮಾಡುವುದು, ಡಿ) ಕೃಷಿ ಉತ್ಪಾದನೆಯನ್ನು ಹೆಚ್ಚಿಸುವುದು

ಇವರಲ್ಲಿ ಯಾರು ಭಾರತದ ಸಂವಿಧಾನಿಕ ಸಭೆಯ ಅಧ್ಯಕ್ಷರಾಗಿದ್ದರು
ಎ) ಡಾ|| ರಾಜೇಂದ್ರ ಪ್ರಸಾದ್,  ಬಿ) ಬಿ.ಆರ್.ಅಂಬೇಡ್ಕರ್,  ಸಿ) ಕೆ.ಎಂ.ಮುನ್ಶಿ,  ಡಿ) ಶ್ರೀಮತಿ ಸರೋಜಿನಿ ನಾಯ್ಡು

ಇವುಗಳಲ್ಲಿ ಯಾವ ವರ್ಷದಲ್ಲಿ ಭಾರತದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿಲ್ಲ
ಎ) 1962,  ಬಿ) 1967,  ಸಿ) 1971,  ಡಿ) 1975

ಒಂದು ವೇಳೆ 2X3=36, 5X4=400, 6X2=144, 3X3=81 ಆದ ಪಕ್ಷದಲ್ಲಿ ಇವುಗಳಲ್ಲಿ ಯಾವುದು 5X5=? ಕ್ಕೆ ಸರಿಯಾದ ಉತ್ತರಯಾವುದು
ಎ) 225,  ಬಿ) 625,  ಸಿ) 125,  ಡಿ) 25

ಭಾರತದ ಪಾರ್ಲಿಮೆಂಟ್ ಇವುಗಳನ್ನೊಳಗೊಂಡಿದೆ
ಎ) ರಾಷ್ಟ್ರಪತಿ, ಲೋಕಸಭೆ, ರಾಜ್ಯಸಭೆ,  ಬಿ) ಲೋಕಸಭೆ, ಸಿ) ರಾಜ್ಯ ಸಭೆ,  ಡಿ) ಲೋಕಸಭೆ & ರಾಜ್ಯಸಭೆ

ಭಾರತದ ನೌಕಾಪಡೆಯ ಮುಖ್ಯಸ್ಥರನ್ನು ಹೀಗೆಂದು ಕರೆಯುತ್ತಾರೆ
ಎ) ಬ್ರಿಗೇಡಿಯರ್,  ಬಿ) ಜನರಲ್,  ಸಿ) ಅಡ್ಮಿರಲ್,  ಡಿ) ಏರ್ ಚೀಫ್ ಮಾರ್ಷಲ್

ಯಾರಿಂದ ಸಾರೆ ಜಹಾಸೆ ಅಚ್ಛಾ ಎನ್ನುವ ದೇಶಭಕ್ತಿಗೀತೆಯು ಬರೆಯಲ್ಪಟ್ಟಿದೆ
ಎ) ರವೀಂದ್ರ ನಾಥ ಠ್ಯಾಗೋರ್,  ಬಿ) ಬಂಕಿಮಚಂದ್ರ ಚಟರ್ಜಿ,  ಸಿ) ಮೊಹಮ್ಮದ್ ಇಕ್ಬಾಲ್,  ಡಿ) ಜಾವೆದ್ ಅಖ್ತರ್

ಫತೇಪುರ ಸಿಕ್ರಿ ನಗರದ ನಿರ್ಮಾತೃ
ಎ) ಅಕ್ಬರ್,  ಬಿ) ಹುಮಾಯೂನ್,  ಸಿ) ಶಹಜಹಾನ್,  ಡಿ) ಜಹಂಗೀರ್

ಸ್ಮೃತಿ ನಾಶ - ಸ್ಮರಣೆಯ ನಾಶವನ್ನು ಸೂಚಿಸಲು ಬಳಸುವ ವೈದ್ಯಕೀಯಪದ
ಎ) ಆಂಬ್ರೋಸಿಯಾ,  ಬಿ) ಅಮ್ನೀಸಿಯಾ,  ಸಿ) ಅನೀಮಿಯಾ,  ಡಿ) ಅನೆಸ್ತೇಸಿಯಾ

ಎಷ್ಟು ವರ್ಷಗಳಿಗೆ ಪ್ಲಾಟೀನಂ ಮಹೋತ್ಸವವನ್ನು ಆಚರಿಸಲಾಗುವುದು
ಎ) 100,  ಬಿ) 50,  ಸಿ) 60,  ಡಿ)
75ವರ್ಷಗಳು

ಹಳೇಬೀಡಿನ ಹಿಂದಿನ ಹೆಸರೇನು
ಎ) ಭೀಮಸಮುದ್ರ,  ಬಿ) ಭರಮಸಾಗರ,  ಸಿ) ದ್ವಾರಸಮುದ್ರ,  ಡಿ) ಧರ್ಮಸಾಗರ

ಇವುಗಳಲ್ಲಿ ಯಾವುದು ಕೆಂಪುರಕ್ತಕಣಗಳ ಸ್ಮಶಾಣವೆಂದು ತಿಳಿಯಲ್ಪಟ್ಟಿದೆ
ಎ) ಅಸ್ಥಿಯ ಮಜ್ಜೆ,  ಬಿ) ಯಕೃತ್(ಲಿವರ್),  ಸಿ) ಪ್ಲೀಹ(ಸ್ಪ್ಲೀನ್),  ಡಿ) ಅಪೆಂಡಿಕ್ಸ್

ಇವುಗಳಲ್ಲಿ ಯಾವುದು ರಕ್ತಹೆಪ್ಪುಗಟ್ಟುವಿಕೆಗೆ ಅತ್ಯಾವಶ್ಯ
ಎ) ಕೆಂಪುರಕ್ತಕಣ,  ಬಿ) ಬಿಳಿರಕ್ತಕಣ,  ಸಿ) ಲಿಂಪೊಸೈಟ್,  ಡಿ) ರಕ್ತದ ಪ್ಲೇಟ್ ಲೆಟ್ಗಳು

ಇವುಗಳಲ್ಲಿ ಯಾವುದು ಪ್ರಾಥಮಿಕ ವರ್ಣಬಣ್ಣಗಳು
ಎ) ಕೆಂಪು, ಹಸಿರು, ನೀಲಿ,  ಬಿ) ಕೆಂಪು, ಹಳದಿ, ನೀಲಿ, ಸಿ) ಹಳದಿ, ನೀಲಿ, ಹಸಿರು,  ಡಿ) ಹಳದಿ, ಹಸಿರು,ಕೆಂಪು

ಇವುಗಳಲ್ಲಿ ಯಾವುದಕ್ಕೆ ಆಪ್ಟಿಕಲ್ ಫೈಬರನ್ನು ಬಳಸುತ್ತಾರೆ
ಎ) ನೇಯ್ಗೆ,  ಬಿ) ಸಂಪರ್ಕ,  ಸಿ) ಸಂಗೀತೋಪಕರಣಗಳು,  ಡಿ) ಕಣ್ಣಿನ ಶಸ್ತ್ರಕ್ರಿಯೆ

ಇವುಗಳನ್ನು ಹೊಂದಿಸಿ

ಎ)

ಎಪಿಕಲ್ಚರ್

1)

ದ್ರಾಕ್ಷಿಬಳ್ಳಿ

ಬಿ)

ಸಿಲ್ವಿಕಲ್ಚರ್

2)

ಮೀನು

ಸಿ)

ವಿಟಿಕಲ್ಚರ್

3)

ಜೇನು

ಡಿ)

ಪಿಸಿಕಲ್ಚರ್

4)

ವೃಕ್ಷಗಳು





ಬಿ

ಸಿ

ಡಿ

a

1

4

3

2

b

3

4

1

2

c

2

1

3

4

d

4

3

2

1

ಈ ಸರಣಿಯ ಮುಂದಿನ ಸಂಖ್ಯೆಯನ್ನು ಬರೆಯಿರಿ
14, 16, 13, 17, 12, 18, 11, ?
ಎ) 12,  ಬಿ) 19,  ಸಿ) 22, ಡಿ) 14

ಇವುಗಳಲ್ಲಿ ಯಾವುದಕ್ಕೆ ಕಪ್ಪುಪೆಟ್ಟಿಗೆ (ಬ್ಲಾಕ್ ಬಾಕ್ಸ್) ಸಂಬಂಧಿಸಿದೆ
ಎ) ಸಿನೆಮಾ,  ಬಿ) ವಿಮಾನ, ಸಿ) ಉಪಗ್ರಹ, ಡಿ) ಛಾಯಾಗ್ರಹಣ

2010 ನೇ ಸಾಲಿನ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ
ಎ) ಸೈನಾ ನೆಹ್ವಾಲ್,  ಬಿ) ಸಾನಿಯಾ ಮಿರ್ಜಾ,  ಸಿ) ಪಂಕಜ್ ಅದ್ವಾನಿ,  ಡಿ) ಅಭಿನವ್ ಬಿಂದ್ರಾ

ಒಂದು ಶ್ರೇಣಿಯ ಮೊದಲ ನಾಲ್ಕು ಸಂಖ್ಯೆಗಳ ಸರಾಸರಿ 20 ಹಾಗು ಕೊನೆಯ ನಾಲ್ಕು ಸಂಖ್ಯೆಗಳ ಸರಾಸರಿ19 ಆಗಿದ್ದು, ಒಂದು ವೇಳೆ ಶ್ರೇಣಿಯ 5 ನೇ ಸಂಖ್ಯೆ 18 ಆಗಿದ್ದಲ್ಲಿ ಮೊದಲನೇ ಸಂಖ್ಯೆ ಯಾವುದು
ಎ) 22,  ಬಿ) 21,  ಸಿ) 19,  ಡಿ) 20

ಇವರಲ್ಲಿ ಯಾವು ಶೀಘ್ರಲಿಪಿಯ ಸಂಶೋಧಕರು
ಎ) ಧಾಮಸ್ ಆಳ್ವಾ ಎಡಿಸನ್,  ಬಿ) ಐಸಾಕ್ ನ್ಯೂಟನ್, ಸಿ) ಆಲ್ಬರ್ಟ್ ಐಸ್ಸ್ಟೀನ್,  ಡಿ) ಐಸಾಕ್ ಪಿಟ್ ಮನ್

ರಾಷ್ಟ್ರೀಯ ಮಾನವ ಹಕ್ಕುಗಳ ಅಧ್ಯಕ್ಷರು ಯಾರು
ಎ) ನ್ಯಾಯಮೂರ್ತಿ ವೈ.ಕೆ.ಸಬರ್ವಾಲ್,  ಬಿ) ನ್ಯಾಯಮೂರ್ತಿ ಜೆ.ಎಸ್.ವರ್ಮಾ,  ಸಿ) ನ್ಯಾಯಮೂರ್ತಿ ಆರ್.ಎಸ್.ಲಹೋಟಿ,  ಡಿ) ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್

ಟೆಸ್ಟ್ ಕ್ರಿಕೇಟ್ ನಲ್ಲಿ ವೈಯುಕ್ತಿಕ ಗರಿಷ್ಠಮೊತ್ತದ(ಸ್ಕೋರ್) ದಾಖಲೆ ಯಾರ ಹೆಸರಿನಲ್ಲಿದೆ
ಎ) ಸಚಿನ್ ತೆಂಡೂಲ್ಕರ್,  ಬಿ) ಗ್ಯಾರಿ ಸೋಬರ್ಸ್,  ಸಿ) ಬ್ರಿಯಾನ್ ಲಾರಾ,  ಡಿ) ವೀರೇಂದ್ರ ಸೆಹವಾಗ್

ಜಲಾಂತರರ್ಗಾಮಿಯಿಂದ ಸಮುದ್ರದ ಮೇಲ್ಮೈಯಲ್ಲಿರುವ ವಸ್ತುಗಳನ್ನು ವೀಕ್ಷಿಸಲು ಬಳಸುವ ಉಪಕರಣ ಯಾವುದು
ಎ) ಸೂಕ್ಷ್ಮದರ್ಶಕ (ಮೈಕ್ರೋಸ್ಕೋಪ್), ಬಿ) ದೂರದರ್ಶಕ (ಟೆಲಿಸ್ಕೋಪ್), ಸಿ) ಪೆರಿಸ್ಕೋಪ್,  ಡಿ) ಎಲೆಕ್ಟ್ರೋಸ್ಕೋಪ್

ಮಲ್ಲಯುದ್ಧ(ಕುಸ್ತಿ)ದಲ್ಲಿ ವಿಶ್ವ ಚಾಂಪಿಯನ್ ಶಿಪ್ನಲ್ಲಿ ಬಂಗಾರದ ಪದಕ ಗಳಿಸಿದ ಪ್ರಥಮ ಭಾರತೀಯ ಕುಸ್ತಿಪಟು ಯಾರು
ಎ) ದಾರಾಸಿಂಗ್,  ಬಿ) ಸತ್ಪಾಲ್ ಸಿಂಗ್,  ಸಿ) ಸುಶೀಲ್ ಕುಮಾರ್,  ಡಿ) ವಿಜೇಂದರ್ ಸಿಂಗ್

2010ರಲ್ಲಿ ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಲ್ಪಟ್ಟ ಕರ್ನಾಟಕದ ಜನಪ್ರಿಯ ಸಿನಿಮಾ ಮತ್ತು ರಂಗಕರ್ಮಿ ಇವರಲ್ಲಿ ಯಾರು
ಎ) ಉಮಾಶ್ರಿ,  ಬಿ) ಸರೋಜಾದೇವಿ,  ಸಿ) ಬಿ.ಜಯಶ್ರೀ,  ಡಿ) ಜಯಮಾಲ

ಇವರಲ್ಲಿ ಯಾರು ನಮಗೆ ಯೋಗ ಸೂತ್ರ ಗಳನ್ನು ನೀಡಿದವರು ಯಾರು
ಎ) ಕಣಾದ,  ಬಿ) ವ್ಯಾಸ,  ಸಿ) ಪತಂಜಲಿ,  ಡಿ) ಗೌತಮ

ಮಲೇಷ್ಯಾ ದೇಶದ ಹಣದ ಹೆಸರು
ಎ) ಬಾಟ್,  ಬಿ) ರಿಂಗಿಟ್,  ಸಿ) ಯೆನ್,  ಡಿ) ಡಾಲರ್

ಮಿಸ್ ವರ್ಲ್ಡ್ - ವಿಶ್ವಸುಂದರಿ ಪಟ್ಟವನ್ನು ಗಳಿಸಿದ ಪ್ರಥಮ ಭಾರತೀಯಳು
ಎ) ಐಶ್ವರ್ಯ ರೈ,  ಬಿ) ರೀಟಾ ಫಾರಿಯಾ,  ಸಿ) ಸುಷ್ಮಿತಾ ಸೇನ್,  ಡಿ) ಲಾರಾದತ್ತ

ಈ ಕೆಳಕಾಣಿಸಿದ ದೇಶಗಳಲ್ಲಿ ಡೆಮಾಸ್ಕಸ್ ಯಾವುದರ ರಾಜಧಾನಿ
ಎ) ಲೆಬನಾನ್,  ಬಿ) ಇರಾಕ್,  ಸಿ) ಇರಾನ್,  ಡಿ) ಸಿರಿಯಾ

ಈ ಕೆಳಗಿನವುಗಳಲ್ಲಿ 1961ರಲ್ಲಿ ಭಾರತೀಯ ಸೈನ್ಯದಿಂದ ಪೋರ್ಚುಗೀಸರ ನಿಯಂತ್ರಣದಿಂದ ಸ್ವತಂತ್ರಗೊಳಿಸಲ್ಪಟ್ಟ ಪ್ರದೇಶ ಯಾವುದು
ಎ) ಪಾಂಡಿಚೇರಿ,  ಬಿ) ಹೈದರಾಬಾದ್,  ಸಿ) ಗೋವಾ,  ಡಿ) ಜುನಾಗಢ

20 ಪುರುಷರು 40 ಗುಣಿಗಳನ್ನು 60 ದಿನಗಳಲ್ಲಿ ಅಗೆಯುವುದಾದರೆ 10 ಪುರುಷರು 20 ಗುಣಿಗಳನ್ನು ಎಷ್ಟು ದಿನಗಳಲ್ಲಿ ಅಗೆಯುವರು
ಎ) 30 ದಿನಗಳು,  ಬಿ) 45 ದಿನಗಳು,  ಸಿ) 60 ದಿನಗಳು,  ಡಿ) 75 ದಿನಗಳು

ಇವರಲ್ಲಿ ಯಾರ ಹೆಸರಿನೊಂದಿಗೆ ಬೇಲೂರು ಮಥ ಗುರುತಿಸಲ್ಪಟ್ಟಿದೆ
ಎ) ಈಶ್ವರ ಚಂದ್ರ ವಿದ್ಯಾಸಾಗರ,  ಬಿ) ಶಂಕರಾಚಾರ್ಯ,  ಸಿ)  ವಿವೇಕಾನಂದ,  ಡಿ) ರಾಜಾರಾಮ ಮೋಹನ ರಾಯ್,

ಇವರಲ್ಲಿ ಯಾರಿಂದ ಕನ್ನಡದ ಕಾದಂಬರಿ ಕವಲು ಬರೆಯಲ್ಪಟ್ಟಿದೆ 
ಎ) ಕುವೆಂಪು,  ಬಿ) ಎಸ್.ಎಲ್.ಬೈರಪ್ಪ,  ಸಿ) ಲಂಕೇಶ್,  ಡಿ) ಯು.ಆರ್.ಅನಂತಮೂರ್ತಿ

ಫೋರ್ತ್ ಎಸ್ಟೇಟ್ ಎಂದರೆ
ಎ) ಮಾಧ್ಯಮಗಳು,  ಬಿ) ಹಿಂದುಳಿದ ರಾಜ್ಯಗಳು,  ಸಿ) ನ್ಯಾಯಾಂಗ  ಡಿ) ಟೀ ಎಸ್ಟೇಟ್

ಇವುಗಳಲ್ಲಿ ಯಾವುದು ನಾಗಾಲ್ಯಾಂಡ್ ರಾಜ್ಯದ ಅಧಿಕೃತ ಭಾಷೆ
ಎ) ಆಂಗ್ಲಭಾಷೆ,  ಬಿ) ಹಿಂದಿ ಭಾಷೆ,  ಸಿ) ಅಸ್ಸಾಮಿ ಭಾಷೆ,  ಡಿ) ನಾಗಾ ಭಾಷೆ

ಈ ಕೆಳಕಾಣಿಸಿದ ಕ್ರಿಯೆಗಳಲ್ಲಿ ಯಾವುದರಲ್ಲಿ ಉಷ್ಣಬಿಡುಗಡೆಯಾಗುವುದು
ಎ) ಮಂಜುಗಡ್ಡೆ ಕರಗುವಾಗ,  ಬಿ) ಅನಿಲ ಸಾಂದ್ರಗೊಳ್ಳುವಾಗ,  ಸಿ) ನೀರು ಕುದಿಯುವಾಗ,  ಡಿ) ನೀರಿನ ಉಷ್ಣತೆಯನ್ನು ಹೆಚ್ಚಿಸಿದಾಗ

ಹಲ್ಲು ಮತ್ತು ಮೂಳೆಗಳಿಗೆ ಅವಶ್ಯಕವಾದ ಖನಿಜಗಳು
ಎ) ಕ್ಯಾಲ್ಶಿಯಂ ಮತ್ತು ಸೋಡಿಯಂ,  ಬಿ) ಕ್ಯಾಲ್ಶಿಯಂ ಮತ್ತು ಪೊಟಾಶಿಯಂ,  ಸಿ) ಕ್ಯಾಲ್ಶಿಯಂ ಮತ್ತು ಫಾಸ್ಫರಸ್,  ಡಿ) ಕ್ಯಲ್ಶಿಯಂ ಮತ್ತು ಕಬ್ಬಿಣ

ಇವರಲ್ಲಿ ಯಾರ ಹೆಸರಿನೊಂದಿಗೆ ಪೌನಾರ್ ಆಶ್ರಮ ಸೇರಿಕೊಂಡಿದೆ
ಎ) ಮಹಾತ್ಮ ಗಾಂಧಿ,  ಬಿ) ಅರವಿಂದರು,  ಸಿ) ವಿನೋಭ ಭಾವೆ,  ಡಿ) ರವಿಶಂಕರ್

ಈಡನ್ ಗಾರ್ಡನ್ ಕ್ರೀಡಾಂಗಣ ಎಲ್ಲಿದೆ
ಎ) ಕೊಲ್ಕತ್ತ,  ಬಿ) ನವದೆಹಲಿ,  ಸಿ) ಮುಂಬೈ,  ಡಿ) ಚೆನೈ

ತುಲಸಿದಾಸರು ಯಾವ ಭಾಷೆಯಲ್ಲಿ ರಾಮಚರಿತ ಮಾನಸವನ್ನು ಬರೆದಿದ್ದಾರೆ
ಎ) ಭೋಜಪುರಿ, ಬಿ) ಹಿಂದಿ,  ಸಿ) ಪಾಲಿ,  ಡಿ) ವ್ರಜ (ಬೃಜ) ಭಾಷೆ

ಸತ್ಯ ಶೋಧಕ ಸಮಾಜದ ಸ್ಥಾಪಕರು
ಎ) ಜ್ಯೋತಿಬಾ ಫುಲೆ,  ಬಿ) ಬಿ.ಆರ್.ಅಂಬೇಡ್ಕರ್,  ಸಿ) ರಾಮಸ್ವಾಮಿ ನಾಯ್ಕರ್,   ಡಿ) ರವೀಂದ್ರನಾಥ ಠ್ಯಾಗೂರ್

ಪತ್ರಿಕಾ ಸ್ವಾತಂತ್ರವು ಸಂವಿಧಾನದ ಯಾವ ವಿಧಿಯನ್ನು ಆಧರಿಸಿ ರೂಪುಗೊಂಡಿದೆ
ಎ) ವಿಧಿ 21,  ಬಿ) ವಿಧಿ 14,  ಸಿ) ವಿಧಿ 19  ಡಿ) ವಿಧಿ 16

ಮೊದಲನೆ ಮಹಾಯುದ್ಧವನ್ನು ಯಾವ ಒಪ್ಪಂದವು ಔಪಚಾರಿಕವಾಗಿ ಮುಕ್ತಾಯಗೊಳಿಸಿತು
ಎ) ವರ್ಸೆಲ್ಸ್ ಒಪ್ಪಂದ,  ಬಿ) ಪ್ಯಾರಿಸ್ ಒಪ್ಪಂದ,  ಸಿ) ವಾಷಿಂಗ್ಟನ್ ಒಪ್ಪಂದ,  ಡಿ) ಲಂಡನ್ ಒಪ್ಪಂದ

ಇವುಗಳಲ್ಲಿ ಯಾವುದಕ್ಕೆ ಕ್ಯೂಟೋ ಪ್ರೊಟೊಕೋಲ್ ಸಂಬಂಧಿಸಿದೆ
ಎ) ಇಂಧನಕ್ಕೆ ಸರಿಯಾದ ಮಾರುಕಟ್ಟೆ ದರ ಸಿಗುವಂತೆ ಮಾಡಲು,  ಬಿ) ಲ್ಯಾಂಡ್ ಮೈನ್ ( ನೆಲಸ್ಪೋಟಕ) ಗಳ ಬಳಕೆಯನ್ನು ಕಡಿಮೆ ಮಾಡಲು,  ಸಿ) ಅಳಿವಿನಂಚಿನಲ್ಲಿರುವ ಪ್ರಾಣಿಗಳ ಸಂತತಿಯನ್ನು ರಕ್ಷಿಸುವ ಬಗ್ಗೆ,  ಡಿ) ಹಸಿರುಮನೆ ಪರಿಣಾಮವನ್ನುಂಟು ಮಾಡುವ ಅನಿಲಗಳನ್ನು ಕಡಿಮೆ ಮಾಡುವ ಬಗ್ಗೆ

ಇವುಗಳಲ್ಲಿ ಯಾವುದರಿಂದ ಡೆಂಗ್ಯು ಜ್ವರ ಬರುತ್ತದೆ
ಎ) ಏಡಿಸ್ ಸೊಳ್ಳೆ,  ಬಿ) ಕ್ಯೂಲೆಕ್ಸ್ ಸೊಳ್ಳೆ,  ಸಿ) ಅನಾಫಿಲಿಸ್ ಸೊಳ್ಳೆ,  ಡಿ) ಟ್ಸೆ-ಟ್ಸೆ ನೊಣ

ತೇನ್ಸಿಂಗ್ ನಾರ್ಗೆ ಮತ್ತು ಎಡ್ಮಂಡ್ ಹಿಲರಿ ಇವರು ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ವರ್ಷ
ಎ) 1965,  ಬಿ) 1954,  ಸಿ) 1953,  ಡಿ) 1966

ಯಾವ ದೇಶವು 2010ರ ವಿಶ್ವಕಪ್ ಫುಟ್ಬಾಲ್ ನಲ್ಲಿ ಜಯಗಳಿಸಿದೆ
ಎ) ಸ್ಪೇಯ್ನ್,  ಬಿ) ಇಟಲಿ,  ಸಿ) ನೆದರ್ ಲ್ಯಾಂಡ್,  ಡಿ) ಬ್ರೆಜಿಲ್

ವಿಶ್ವಸಂಸ್ಥೆ (ಯು.ಎನ್.ಓ) ಅಸ್ತಿತ್ವಕ್ಕೆ ಬಂದ ವರ್ಷ
ಎ) 1943,  ಬಿ) 1944,  ಸಿ) 1945,  ಡಿ) 1946

ಕುಸುಮ ಬಾಲೆ ಈ ಕೃತಿಯ ಕರ್ತೃ
ಎ) ದೇವನೂರು ಮಹದೇವ,  ಬಿ) ಎಸ್.ಎಲ್ ಬೈರಪ್ಪ,  ಸಿ) ಯು.ಆರ್.ಅನಂತಮೂರ್ತಿ,  ಡಿ) ಲಂಕೇಶ್

ಇವುಗಳಲ್ಲಿ ಯಾವುದರಿಂದ ಅಂಡಮಾನ್ ಸಮೂಹದ ಮತ್ತು ನಿಕೋಬಾರ್ ಸಮೂಹದ ದ್ವೀಪಗಳು ಪರಸ್ಪರ ಬೇರ್ಪಡಿಸಲ್ಪಟ್ಟಿವೆ
ಎ) ಗ್ರೇಟ್ ಚಾನೆಲ್,  ಬಿ) ಟೆನ್ ಡಿಗ್ರಿ ಚಾನೆಲ್,  ಸಿ) ಬಂಗಾಳ ಕೊಲ್ಲಿ,  ಡಿ) ಅಂಡಮಾನ್ ಸಮುದ್ರ

ಸೀ ಬರ್ಡ್ ನೌಕಾನೆಲೆ ಇಲ್ಲಿದೆ
ಎ) ಕೊಚ್ಚಿನ್,  ಬಿ) ಕಾರವಾರ,  ಸಿ) ವಿಶಾಖ ಪಟ್ಟಣ, ಡಿ) ಪಾಂಡಿಚೇರಿ

ಗಾಂಧೀಜಿಯನ್ನು ಮಹಾತ್ಮ ಎಂದು ಪ್ರಥಮ ಬಾರಿಗೆ ಕರೆದಿದ್ದುಯಾರು
ಎ) ಲೋಕಮಾನ್ಯ ತಿಲಕರು,  ಬಿ) ಗೋಪಾಲ ಕೃಷ್ಣ ಗೋಖಲೆ,  ಸಿ) ಜವಾಹರ ಲಾಲ್ ನೆಹರು,  ಡಿ) ರವೀಂದ್ರ ನಾಥ ಟ್ಯಾಗೂರ್

ಒಂದು ವೇಳೆ HKUJ ಏನ್ನುವುದು FISH ಎಂದಾದರೆ UVCD ಎನ್ನುವುದು ಏನಾಗುವುದು
ಎ) STAR,   ಬಿ)STAK,  ಸಿ)STAL,  ಡಿ)STAB

ಭಾರತವು ಸ್ವತಂತ್ರವಾದಾಗ ಇವರಲ್ಲಿ ಯಾರು ಬ್ರಿಟನ್ನಿನ (ಇಂಗ್ಲೆಂಡಿನ) ಪ್ರಧಾನಮಂತ್ರಿಯಾಗಿದ್ದವರು
ಎ) ವಿನ್ಸ್ಟನ್ ಚರ್ಚಿಲ್,  ಬಿ) ಕ್ಲೆಮೆಂಟ್ ಅಟ್ಲಿ,  ಸಿ) ಲಾರ್ಡ್ ಮೌಂಟ್ ಬ್ಯಾಟನ್,  ಸಿ) ನೆವಿಲ್ ಚೇಂಬರ್ ಲೇನ್

ಆಧುನಿಕ ಜಗತ್ತಿನ ಪ್ರಥಮ ಮಹಿಳಾ ಪ್ರಧಾನ ಮಂತ್ರಿ
ಎ) ಸಿರಿಮಾವೋ ಬಂದಾರನಾಯಕೆ,  ಬಿ) ಇಂದಿರಾ ಗಾಂಧಿ,  ಸಿ) ಗೊಲ್ಡಾಮೀರ್,  ಡಿ) ಮಾರ್ಗರೆಟ್ ಥ್ಯಾಚರ್