Monday, February 15, 2010

Test-4

ಇತ್ತೀಚೆಗೆ ಪ್ರಕಟಗೊಂಡ ಭಾರತೀಯ ನಾಯಕರ ವಿಖ್ಯಾತ ಭಾಷಣಗಳನ್ನೊಳಗೊಂಡ "ಗ್ರೀಟ್ ಇಂಡಿಯನ್ ಅಂಡ್ ದೇರ್ ಲ್ಯಾಂಡ್ಮಾರ್ಕ್ ಸ್ಪೀಚಸ್" ಎಂಬ ಗ್ರಂಥದ ಲೇಖಕರು
ಎ) ಮನೋಹರ್ ಮತ್ತು ಸರಿತಾ ಪ್ರಭಾಕರ್, ಬಿ) ಗೀತಾ ಮಹಾಜನ್, ಸಿ) ಕಿರಣ್ ದೇಸಾಯ್, ಡಿ) ಅಲಿಖೀ ಪದ್ಮಾಸಿ

ಭಾರತೀಯ ಸಂವಿಧಾನದ ಭಾಗ XIV (A)ಯು, ಇಲ್ಲಿನ ಯಾವುದನ್ನು ನಿರೂಪಿಸುತ್ತದೆ
ಎ) ಆದಿವಾಸಿಗಳು,  ಬಿ) ಟ್ರಿಬ್ಯುನಲ್ ಗಳು,  ಸಿ) ಅಲ್ಪಸಂಖ್ಯಾತರು,  ಡಿ) ಮಹಿಳೆಯರು

ಪೊಟ್ಯಾಶಿಯಂ-ಆರ್ಗಾನ್ ತಂತ್ರವು ಈ ಕೆಳಗಿನ ಯಾವುದರ ಪರ್ಯಾಯವಾಗಿ ಬಳಸಲ್ಪಡುತ್ತದೆ
ಎ) ಲಿಟ್ಮಸ್ ತಂತ್ರ,  ಬಿ) ಕ್ಯಾಡ್ಮಿಯಂ ತಂತ್ರ,  ಸಿ) ಸಿ-14 ತಂತ್ರ,  ಡಿ) ಬೇರಿಯಂ ತಂತ್ರ

ಹಿಮಾಲಯದ ಶಿಖರಗಳಲ್ಲಿ, ಇಲ್ಲಿನ ಯಾವ ಶಿಖರವು ಭಾರತದಲ್ಲಿಲ್ಲ
ಎ) ನಂದಾದೇವಿ,  ಬಿ) ಕಾಮೆಟ್ ಶಿಖರ,  ಸಿ) ಅನ್ನಪೂರ್ಣ,  ಡಿ) ಕಾಂಚನಗಂಗಾ

ಭಾರತದ ಗ್ರಾಮಗಳು "ಸ್ವಯಂ ಪರಿಪೂರ್ಣ ಪುಟ್ಟ ಗಣರಾಜ್ಯಗಳು" ಎಂದು ಕರೆದವರು
ಎ) ಅಲೆಕ್ಸಾಂಡರ್ ಕ್ಯಾಂಪ್ಬೆಲ್,  ಬಿ) ಬೇಡನ್-ಪೂವೆಲ್,  ಸಿ) ಆಂದ್ರೆ ಬೆತೆ,  ಡಿ) ಚಾರ್ಲ್ಸ್ ಮೆಕಾಫೆ

ಶಮನ್ ಎಂದರೆ
ಎ) ಸಮಾಧಾನ ಮಾಡುವುದು,  ಬಿ) ಕ್ಷಮೆ,  ಸಿ) ಬುಡಕಟ್ಟು ಪುರೋಹಿತ,  ಡಿ) ಮಂತ್ರ ವಿದ್ಯೆಯಿಂದ ಶಮನಗೊಳಿಸುವುದು

ಗೋಲ್ಡನ್ ಬೋ ಎಂಬುದು
ಎ) ಸಂತಾಲರು ಪೂಜಿಸುವ ಪುರಾತನ ಮಹತ್ವದ ಆಯುಧ,  ಬಿ) ಮಹಾಭಾರತದ ಅರ್ಜುನನಿಗೆ ಸಂಬಂಧಿಸಿದ ಒಂದು ಕಥೆ,  ಸಿ)ಟಿ.ಎಸ್. ಎಲಿಯಟ್ ರವರ ಸುನೀತಗಳ ಗುಚ್ಛ,  ಡಿ) ಮಂತ್ರವಿದ್ಯೆಯ ಕುರಿತಾದ ಸರ್.ಜೇಮ್ಸ್ ಫ್ರೇಜರ್ ಅವರ ಕೃತಿ

ನಿಯೋಗ ಎಂದರೆ
ಎ) ಹಿಂದೂ ಪಂಚಾಂಗದ ಪ್ರಕಾರ ಒಂದು ಅಪಸಮಯ,  ಬಿ) ಮೇಲು ಜಾತಿಯ ಗಂಡಸು ಕೆಳ ಜಾತಿಯ ಹೆಂಗಸನ್ನು ವಿವಾಹವಾಗುವುದು,  ಸಿ) ಮಕ್ಕಳಿಲ್ಲದ ವಿಧವೆಯು ಮಕ್ಕಳನ್ನು ಪಡೆಯುವ ಬಗೆ,  ಡಿ) ಪ್ರೀತಿಪಾತ್ರರ ವಿಯೋಗದಿಂದ ಉಂಟಾಗುವ ದು:ಖ

ಇಲ್ಲಿನ ಯಾವುದನ್ನು ಪ್ರಾಚೀನ ಭಾರತದ ಹೆಟೆರೋಡಾಕ್ಸ್ ಚಿಂತನೆ ಎಂದು ಉದಾಹರಿಸಬಹುದು
ಎ) ವೇದಗಳು,  ಬಿ) ಉಪನಿಷತ್ತುಗಳು,  ಸಿ) ಬ್ರಹ್ಮಸೂತ್ರಗಳು,  ಡಿ) ಲೋಕಾಯತ

ಬೂಟ್ ಲೆಗ್ಗರ್ ಎಂದರೆ
ಎ) ಸದಾ ಬೂಟುಗಳನ್ನು ಧರಿಸುವವನು,  ಬಿ) ಯಾವುದೇ ಆದಾಯವಿಲ್ಲದವನು,  ಸಿ) ಕಳ್ಳಭಟ್ಟಿ ಮತ್ತು ಮಾದಕದ್ರವ್ಯಗಳ ಕಳ್ಳಸಾಗಾಣಿಕೆಯಲ್ಲಿ ತೊಡಗಿದವನು,  ಡಿ) ಸಮವಸ್ತ್ರದಲ್ಲಿನ ಪೋಲೀಸು ಅಧಿಕಾರಿ

ಸಾಂಸ್ಕೃತಿಕ ಸಾಪೇಕ್ಷತಾ ಸಿದ್ಧಾಂತವನ್ನು ಪ್ರತಿಪಾದಿಸಿದವರು
ಎ) ಆಲ್ಬರ್ಟ್ ಐನ್ ಸ್ಟೀನ್,  ಬಿ) ಡಾ|| ಮಾರ್ಗರೇಟ್ ಮೀಡ್,  ಸಿ) ಜಿ.ಹೆಚ್.ಮೀಡ್,  ಡಿ) ಬೋರ್ಡ್ಯೂ

ಬೊಹೆಮಿಯನ್ ಎಂದರೆ
ಎ) ಯೂರೋಪಿನ ಬೊಹೆಮಿಯ ಎಂಬ ದೇಶದ ಪ್ರಜೆ,  ಬಿ) ನಿಯಮಗಳ ಕಟ್ಟಾ ಅನುವರ್ತಿ,  ಸಿ) ನಿಯಮಗಳ ಅಪವರ್ತಿ,  ಡಿ)ಮಧ್ಯ ಆಫ್ರಿಕಾದ ಬುಷ್ಮೆನ್ ಬುಡಕಟ್ಟಿನ ಒಂದು ಗುಂಪು

ಜಾರ್ಜ್ ಎಲ್ಟನ್ ಮೇಯೋ ಅವರು ಜನಪ್ರಿಯತೆಯನ್ನು ಗಳಿಸಿದ ಕ್ಷೇತ್ರ
ಎ) ವೈಜ್ಙಾನಿಕ ವ್ಯವಸ್ಥಾಪನೆ,  ಬಿ) ಬೆಳಕಿನ ಅಧ್ಯಯನ,  ಸಿ) ವ್ಯವಸ್ಥಾಪನೆಯ ತೀವ್ರಗಾಮಿ ದೃಷ್ಟಿಕೋನ,  ಡಿ) ಹಾಥಾರ್ನ್ ಅಧ್ಯಯನಗಳು

ಟೋಟೆಮ್ ಅಂಡ್ ಟ್ಯಾಬೂ ಎಂಬ ಜನಪ್ರಿಯ ಗ್ರಂಥದ ಕರ್ತೃ ಯಾರು
ಎ) ಬ್ರೌನಿಸ್ಲಾ ಕ್ಯಾಸ್ಪರ್ ಮ್ಯಾಲಿನೋಸ್ಕಿ,  ಬಿ) ಎ.ಆರ್.ರ್ಯಾಡ್ ಕ್ಲಿಫ್,  ಸಿ) ಸಿಗ್ಮಂಡ್ ಫ್ರಾಯ್ಡ್,  ಡಿ) ಎಮೈಲ್ ಡರ್ಖೀಮ್

ಇವರಲ್ಲಿ ಯಾರು ಆಗಸ್ಟ್ 9, 1942ರ ಮುಂಜಾನೆ 'ಬ್ರಿಟೀಷರೇ ಭಾರತವನ್ನು ಬಿಟ್ಟು ತೊಲಗಿ' ಚಳುವಳಿಗೆ ಚಾಲನೆಯಿತ್ತರು
ಎ) ರೇಣುಕಾ ರಾಯ್, ಬಿ) ಅರುಣಾ ಆಸಿಫ್ ಆಲಿ,  ಸಿ) ಸರೋಜಿನಿ ನಾಯಿಡು,  ಡಿ) ಇಂದಿರಾ ಪ್ರಿಯದರ್ಶಿನಿ

ಪಾರ್ಸಿಗಳ ಪವಿತ್ರ ಯಾತ್ರಾಸ್ಥಳ ಅಗ್ನಿದೇಗುಲ ಇರುವುದು
ಎ) ಟೆಹರಾನ್,  ಬಿ) ಗುಜರಾತಿನ ಸೂರತ್,  ಸಿ) ಉತ್ತರ ಪ್ರದೇಶದ ಉದ್ವಾದ,  ಡಿ) ರಾಜಾಸ್ಥಾನದ ಮೇವಾರ

ಸರ್ಕಾರದ ವಿದೇಶಾಂಗ ನೀತಿಯನ್ನು ರೂಪಿಸುವವರು
ಎ) ವಿದೇಶಾಂಗ ಸಚಿವರು,  ಬಿ) ಪ್ರಧಾನಮಂತ್ರಿಗಳು,  ಸಿ) ಸಂಪುಟ,  ಡಿ) ಪಾರ್ಲಿಮೆಂಟ್

ರಿಟ್ ಆಫ್ ಮ್ಯಾಂಡಮಸ್ ಇವರಿಗೆ ಅನ್ವಯಿಸುವುದಿಲ್ಲ
ಎ) ನಗರಪಾಲಿಕೆ,  ಬಿ) ಸಾರ್ವಜನಿಕ ಪ್ರಾಧಿಕಾರ,  ಸಿ) ರಾಜ್ಯಪಾಲರು,  ಡಿ) ಕೆಳಗಿನ ನ್ಯಾಯಾಲಯ

ಸೂರ್ಯ ಅಸ್ತಮಿಸುವಾಗ ಕೆಂಪಗೆ ಕಾಣುತ್ತಾನೆ ಇದಕ್ಕೆ ಕಾರಣ
ಎ) ಕೆಂಪು ಬಣ್ಣ ಹೆಚ್ಚು ಚದುರುವುದು,  ಬಿ) ನೀಲಿ ಬಣ್ಣ ಅತೀ ಕಮ್ಮಿ ಚದುರುವುದು,  ಸಿ) ಬೆಳಕು ಬಾಗುವುದು,  ಡಿ) ಕೆಂಪು ಬಣ್ಣ ಅತೀ ಕಮ್ಮಿ ಚದುರುವುದು

ಮೋಟಾರ್ ನ ಕಾರ್ಯವಿಧಾನದ ತತ್ವ
ಎ) ವಿದ್ಯುತ್ತಿನ ಕಾಂತೀಯ ಪರಿಣಾಮ,  ಬಿ) ವಿದ್ಯುತ್ತಿನ ಯಾಂತ್ರಿಕ ಪರಿಣಾಮ,  ಸಿ) ವಿದ್ಯುತ್ತಿನ ಕಾಂತೀಯ ಪರಿಣಾಮ,  ಡಿ) ಪಿಜೋ ವಿದ್ಯುತ್ ಪರಿಣಾಮ

ಕ್ಷ-ಕಿರಣ ಉತ್ಪಾದನೆ ಕ್ರಿಯೆಯ ವಿಲೋಮ ಕ್ರಿಯೆಯೆಂದರೆ
ಎ) ವಿದ್ಯುತ್ತಿನ ದ್ಯುತಿ ಪರಿಣಾಮ,  ಬಿ) ಜಿಮಾನ್ ನ ಪರಿಣಾಮ,  ಸಿ) ಫೋಟೋ ಎಲೆಕ್ಟ್ರಿಕ್ ಎಫೆಕ್ಟ್,  ಡಿ) ಸ್ಟಾರ್ಕ್ ಪರಿಣಾಮ

ಉತ್ತಮ ಶಾಖ ಹೀರಕಗಳು ಯಾವಾಗಲೂ ಉತ್ತಮ ಶಾಖಾ ವಿಸರ್ಜಕಗಳಾಗಿರುವುವು.  ಈ ಹೇಳಿಕೆಯು ಯಾವ ನಿಯಮದ ಫಲ
ಎ) ಕಿರ್ ಕಾಫ್ ವಿಕರಣ ನಿಯಮ,  ಬಿ) ಸ್ಟೀಫಾನ್ ನ ವಿಕಿರಣ ನಿಯಮ,  ಸಿ) ಪ್ಲಾಂಕ್ ನ ವಿಕಿರಣ ನಿಯಮ,  ಡಿ) ರ್ಯಾಲೆ-ಜೀನ್ಸ್ ವಿಕಿರಣ ನಿಯಮ

ಎತ್ತರದ ತೆಂಗಿನ ಮರದ ತುದಿಯನ್ನು ನೀರು ತಲುಪುವುದು ಇದಕ್ಕೆ ಕಾರಣ
ಎ) ನೀರಿನ ಶ್ಯಾನತ್ವ ಗುಣ (Viscosity),  ಬಿ) ನೀರಿನ ಮೇಲ್ಮೈ ತುಯ್ತು (Surface Tension)ವಾಯುಮಂಡಲದ ಒತ್ತಡ,  ಡಿ) ಮರದ ಬೇರಿನಲ್ಲಿ ನೆಟ್ಟಿರುವ ರೇಚಕ ಯಂತ್ರ (Pump)

ಟಾಲ್ಕಂ ಪೌಡರ್ ನ ಮೂಲ ವಸ್ತು
ಎ) ಮೆಗ್ನೀಷಿಯಂ ಕ್ಲೋರೈಡ್,  ಬಿ) ಮೆಗ್ನೀಷಿಯಂ ಸಲ್ಫೇಟ್,  ಸಿ) ಮ್ಯಾಂಗನೀಸ್ ಸಿಲಿಕೇಟ್,  ಡಿ) ಮೆಗ್ನೀಷಿಯಂ ಸಿಲಿಕೇಟ್

ನೀವು ಸ್ವತ: ಸಾಬೂನು ತಯಾರು ಮಾಡಲು ಬೇಕಾದ ಕಚ್ಚಾ ಸಾಮಗ್ರಿಗಳು
ಎ) ಸೋಡಿಯಂ ಹೈಡ್ರಾಕ್ಸೈಡ್ ಮತ್ತು ಶಾಖ ತೈಲ(Vegetable Oil),  ಬಿ) ಸೋಡಿಯಂ ಹೈಡ್ರಾಕ್ಸೈಡ್ ಮತ್ತು ಪ್ರಾಣಿಗಳ ಕೊಬ್ಬು,  ಸಿ) ಅಲ್ಯೂಮಿನಂ ಹೈಡ್ರಾಕ್ಸೈಡ್ ಮತ್ತು ಶಾಕತೈಲ,  ಡಿ) ಸ್ಫಟಿಕ ಮತ್ತು ಖನಿಜ ತೈಲ

ಈಗ ಬಳಕೆಯಲ್ಲಿರುವ ಛಾಯಾಗ್ರಹಣದಲ್ಲಿ  ಉಪಯೋಗಿಸುವ ನಿರಪಾಯಕಾರಿ ಫಿಲ್ಮ್ (Safety film) ನಲ್ಲಿನ ಮೂಲವಸ್ತು ಯಾವುದು
ಎ) ನೈಟ್ರೋ ಸೆಲ್ಯುಲೋಸ್,  ಬಿ) ಸೆಲ್ಲೋಬಯೋಸ್ ನೈಟ್ರೇಟ್,  ಸಿ) ಜೆಲಟಿನ್,  ಡಿ) ಸೆಲ್ಯೂಲೋಸ್ ಟ್ರೈಅಸಿಟೇಟ್

ಚಿಹ್ವಹ್ವ, ಗ್ರೇಟ್ ಡೇನ್, ಸೈಂಟ್ ಬರ್ನಾರ್ಡ್ ಮತ್ತು ಯಾರ್ಕ್ ಷೈರ್ ಟೆರ್ರಿಯರ್ - ಈ ನಾಲ್ಕು ಹೆಸರುಗಳಲ್ಲಿನ ಸಮಾನ ಅಂಶವೇನು
ಎ) ಕುದುರೆ ತಳಿಯ ಪ್ರಭೇದಗಳು,  ಬಿ) ಸಮಾಜ ವಿರೋಧಿ ವ್ಯಕ್ತಿಗಳ ಹೆಸರುಗಳು,  ಸಿ) ಪೌರಾಣಿಕ ಕಥಾಪಾತ್ರಗಳ ಹೆಸರುಗಳು,  ಡಿ) ನಾಯಿಯ ತಳಿ ಪ್ರಭೇದಗಳು

ನಾವು ಅಗಿಯುವ ಕಬ್ಬಿನ ಕಾಂಡದ ಸಿಹಿ ರುಚಿಗೆ ಕಾರಣ ಅದರಲ್ಲಿರುವ ಸಕ್ಕರೆ.  ಅದರ ರಾಸಾಯನಿಕ ನಾಮವೇನು
ಎ) ಸುಕ್ರೋಸ್,  ಬಿ) ಗ್ಲೂಕೋಸ್  ಸಿ) ಫ್ರಕ್ಟೋಸ್,  ಡಿ) ಮಾಲ್ಟೋಸ್

ಕ್ಯೂಟೋ ಶಿಷ್ಟಾಚಾರ (Kyoto Protocol) ಎಂದರೇನು
2008 ಮತ್ತು 2012 ಗಳ ನಡುವೆ ಇಂಗಾಲದ ವಿಸರ್ಜನೆಯನ್ನು ಶೇಕಡಾ 5 ರಷ್ಟು ಇಳಿಸಬೇಕೆಂದು ಉದ್ಯಮ ಶೀಲ ರಾಷ್ಟ್ರಗಳ ನಡುವೆ ಆದ ಕಡ್ಡಾಯ ಒಪ್ಪಂದ

ಮಾಮೂಲಿ ಹಸುವಿನ ಹಾಲಿಗಿಂತ ಕೆನೆರಹಿತ ಹಾಲು (Skimmed milk) ಯಾವ ಅಂಶದಲ್ಲಿ ಭಿನ್ನವಾಗಿದೆ
ಎ) ಪ್ರೊಟೀನ್ ಅಂಶ ಕಡಿಮೆ,  ಬಿ) ಕೊಬ್ಬಿನ ಅಂಶ ಅತೀ ಕಡಿಮೆ,  ಸಿ) ಹೆಚ್ಚು ಸೋಂಕು ರಹಿತ,  ಡಿ) ಹೆಚ್ಚು ಜೀವಸತ್ವ ಭರಿತ

ಭಾರತೀಯ ಸಂಜಾತ ವಿಜ್ಙಾನಿ ಶ್ರೀ ವೆಂಕಟರಾಮನ್ ರಾಮಕೃಷ್ಣನ್ ರವರು 2009 ನೇ ವರ್ಷದ ನೋಬಲ್ ಪ್ರಶಸ್ತಿಯನ್ನು ರಸಾಯನ ಶಾಸ್ತ್ರದಲ್ಲಿಗಳಿಸಿದ್ದಾರೆ.  ಈ ಪ್ರಶಸ್ತಿಯನ್ನು ಹಂಚಿಕೊಂಡ ಇನ್ನಿಬ್ಬರು ವಿಜ್ಞಾನಿಗಳು ಯಾರು
ಥಾಮಸ್ ಎ. ಸ್ಟೀಜ್ ಮತ್ತು ಅಡಾ ಯೋನತ್

ಹ್ಯೂಮುಲಿನ್ ಎಂದರೆ
ಎ) ಮಾನವನನ್ನು ಸೋಂಕಿಸುವ ಪ್ರಾಣಾಂತಿಕ ವೈರಸ್,  ಬಿ) ಮಾನವನ ಬಳಕೆಗಾಗಿಯೇ ಇರುವ ಜೀವಿನಾಶಕ,  ಸಿ) ಮಧುಮೇಹ ರೋಗಿಗಳಿಗೆ ಈಗ ಕೊಡಲ್ಪಡುವ ಇನ್ಸುಲಿನ್ನಿನ ಆಧುನಿಕ ರೂಪಾಂತರ,  ಡಿ) ಮಣ್ಣುಗೊಬ್ಬರದಿಂದ ತೆಗೆಯಲ್ಪಟ್ಟ ರಸಾಯನಿಕ ವಸ್ತು

ಆರ್ ಡಿ ಎಕ್ಸ್ (RDX) ನ ರಾಸಾಯನಿಕ ನಾಮವೇನು
ಎ) ಟ್ರೈನೈಟ್ರೋ ಟಾಲ್ವಿನ್,  ಬಿ) ಸೈಕ್ಲೋಟ್ರೈಮೆತಿಲೀನ್ ಟ್ರೈನೈಟ್ರಮಿನ್,  ಸಿ) ಅಮೋನಿಯಂ ನೈಟ್ರೀಟ್,  ಡಿ) ನೈಟ್ರೋಗ್ಲಿಸರೀನ್

ಈ ಕೆಳಕಂಡವಲ್ಲಿ ಮ್ಯಾನ್ಗ್ರೋವ್ ಸಸ್ಯಕ್ಕೆ ಉದಾಹರಣೆ
ಎ) ತೆಂಗಿನ ಮರ,  ಬಿ) ರೈಜೋಫೋರ  ಸಿ) ಸಮುದ್ರತೀರದ ಯಾವುದೇ ಸಸ್ಯ,  ಡಿ) ಆಲದಮರ

NABARD ಒಂದು
ಎ) ಸಹಕಾರಿ ಬ್ಯಾಂಕು,  ಬಿ) ವಾಣಿಜ್ಯ ಬ್ಯಾಂಕು,  ಸಿ) ಗ್ರಾಮೀಣ ಬ್ಯಾಂಕು,  ಡಿ) ಅಭಿವೃಧ್ದಿ ಬ್ಯಾಂಕು

ಅರ್ಥಶಾಸ್ತ್ರಕ್ಕೆ 2009ನೇ ವರ್ಷದಲ್ಲಿ ನೊಬೆಲ್ ಪುರಸ್ಕಾರ ದೊರೆತಿರುವುದು
ಎ) ಪಾಲ್ ಕ್ರುಗ್ಮನ್ರಿಗೆ,  ಬಿ) ಎಲಿನರ್ ಓಸ್ಟ್ರೋಮ್ ಹಾಗೂ ಆಲಿವರ್ ವಿಲಿಯಂಸನ್ರಿಗೆ,  ಸಿ) ಲಿಯೋನಿಡ್ ಹರ್ವಿಜ್ ಹಾಗೂ ಎರಿಕ್-ಎಸ್-ಮಾರ್ಕಿನ್ ರಿಗೆ  ಡಿ) ಫಿನ್ ಇ ಕಿಡ್ ಲ್ಯಾಂಡ್ ಮತ್ತು ಎಡ್ವರ್ಡ್ ಸಿ.ಪ್ರಸ್ಕಾನ್ ರಿಗೆ

H.D.I ಇದನ್ನು ಪರಿಗಣಿಸುವುದಿಲ್ಲ
ಎ) ಜೀವನ ನಿರೀಕ್ಷೆ,  ಬಿ) ಜೀವನ ಮಟ್ಟ ಸೂಚಿ,  ಸಿ) ಶಿಕ್ಷಣ ಮಟ್ಟ ಸೂಚಿ,  ಡಿ) ಲಿಂಗ ಬೆಳವಣಿಗೆ ಸೂಚಿ

ಭಾರತದ 2001ರ ಲಿಂಗಾನುಪಾತ
ಎ) 964,  ಬಿ) 929,  ಸಿ) 933,  ಡಿ) 941

ತೆರಿಗೆ ಎಂದರೆ
ಎ) ಶ್ರೀಮಂತರು ಕಡ್ಡಾಯವಾಗಿ ಕೊಡಬೇಕಾದ ದೇಣಿಗೆ,  ಬಿ) ಶ್ರೀಮಂತರು ಸ್ವಯಂ ಇಚ್ಛೆಯಿಂದ ಕೊಡುವ ದೇಣಿಗೆ, ಸಿ) ಯಾರ ಮೇಲೆ ವಿಧಿಸಲಾಗಿರುವುದೋ ಆ ವ್ಯಾಕ್ತಿ ಕಡ್ಡಾಯವಾಗಿ ಕೊಡಬೇಕಾದ ದೇಣಿಗೆ,  ಡಿ) ನಿರೀಕ್ಷಿತರಿಂದ ಸ್ವಪ್ರೇರಿತ ದೇಣಿಗೆ

ಈ ವಿಧಿಗಣುಗುಣವಾಗಿ ಮುಂಗಡ ಪತ್ರ ತಯಾರಿಸಲಾಗುತ್ತದೆ
ಎ) ಸಂವಿಧಾನದ 112ನೇ ವಿಧಿ,  ಬಿ) 280ನೇ ವಿಧಿ,  ಸಿ) 336 ನೇ ವಿಧಿ,  ಡಿ) 110ನೇ ವಿಧಿಗನುಗುಣವಾಗಿ

13ನೇ ಹಣಕಾಸು ಆಯೋಗದ ಮುಖ್ಯಸ್ಥರು
ಎ) ಸಿ.ರಂಗರಾಜನ್,  ಬಿ) ವಿಜಯ್ ಕೇಳ್ಕರ್,  ಸಿ) ಎ.ಎಮ್. ಖುಸ್ರೋ,  ಡಿ) ಡಿ. ಸುಬ್ಬರಾವ್

ವಾಯು ಸಾರಿಗೆಯಲ್ಲಿ 'ತೆರೆದ ಆಕಾಶ ನೀತಿ' ಈ ಕಾರಣಕ್ಕಾಗಿ
ಎ) ಜನರ ಮುಕ್ತಚಲನೆಗೆ ಅವಕಾಶ ಕಲ್ಪಿಸಲು,  ಬಿ) ನಿರ್ಯಾತವು ಸರಳವಾಗಲು,  ಸಿ) ಆಯಾತವು ಸರಳವಾಗಲು,  ಡಿ) ವಿಶ್ವದ ಇತರ ದೇಶಗಳೊಂದಿಗೆ ಉದಾರವಾಗಿ ಸಂಬಂದ ವೃಧ್ಧಿಸಲು

ಮುಂಬಯಿಯ ಶೇರು ಮಾರುಕಟ್ಟೆಯ ಸಂಕೇತ (BSE)
ಎ) ಸಗಟು ಬೆಲೆ ಸೂಚಿ,  ಬಿ) ಸೆನ್ಸೆಕ್ಸ್,  ಸಿ) ಗ್ರಾಹಕರ ಬೆಲೆ ಸೂಚಿ,  ಡಿ) ನಿಫ್ಟಿ

ಮ್ಯೂಚಿಯಲ್ ಫಂಡ್ಸ್ ಇದಕ್ಕೆ ಸಂಬಂಧಿಸಿದೆ
ಎ) ವೈಯುಕ್ತಿಕ ಹೂಡಿಕೆ,  ಬಿ) ಸಾರ್ವಜನಿಕ ಹೂಡಿಕೆ,  ಸಿ) ಒಟ್ಟಾಗಿ ಹೂಡಿಕೆ,  ಡಿ) ಖಾಸಗಿ ಹೂಡಿಕೆ

ಎಸ್.ಬಿ.ಐ. ಒಂದು
ಎ) ರಾಷ್ಟ್ರೀಕೃತ ಬ್ಯಾಂಕ್,  ಬಿ) ಸಾರ್ವಜನಿಕ ವಲಯದ ಬ್ಯಾಂಕ್,  ಸಿ) ಖಾಸಗಿ ವಲಯದ ಬ್ಯಾಂಕ್,  ಡಿ) ಅಭಿವೃಧ್ಧಿ ಬ್ಯಾಂಕ್

ಕಾರ್ಮಿಕನೊಬ್ಬ ವರ್ಷವೊಂದರಲ್ಲಿ 183 ದಿನಗಳು ಕೆಲಸ ನಿರ್ವಹಿಸಲು ಅಸಮರ್ಥನಾದರೆ ಆಗ ಅದನ್ನು ಹೀಗೆ ಹೇಳಲಾಗುತ್ತದೆ
ಎ) ಸಹಜ ನೀತಿ ನಿರುದ್ಯೋಗ,  ಬಿ) ವಾರದ ಸ್ಥಿತಿ ನಿರುದ್ಯೋಗ,  ಸಿ) ದಿನವಹಿ ಸ್ಥಿತಿ ನಿರುದ್ಯೋಗ,  ಡಿ) ರಚನಾತ್ಮಕ ನಿರುದ್ಯೋಗ

NREGP ಯ ಮುಖ್ಯ ಗುರಿ ಇದನ್ನೊದಗಿಸುವುದಾಗಿದೆ
ಎ) 3 ಜನರಿರುವ ಕುಟುಂಬವೊಂದಕ್ಕೆ ವರ್ಷವೊಂದರಲ್ಲಿ 100 ದಿನಗಳು ಕೆಲಸ ಒದಗಿಸುವುದು, 
ಬಿ) 2 ಜನರಿರುವ ಕುಟುಂಬವೊಂದಕ್ಕೆ ವರ್ಷವೊಂದರಲ್ಲಿ 100 ದಿನಗಳು ಕೆಲಸ ಒದಗಿಸುವುದು, 
ಸಿ) 3 ಜನರಿರುವ ಕುಟುಂಬವೊಂದಕ್ಕೆ ವರ್ಷವೊಂದರಲ್ಲಿ 120 ದಿನಗಳು ಕೆಲಸ ಒದಗಿಸುವುದು,
 ಡಿ) 2 ಜನರಿರುವ ಕುಟುಂಬವೊಂದಕ್ಕೆ ವರ್ಷವೊಂದಕ್ಕೆ 120 ದಿನಗಳ ಕೆಲಸ ಒದಗಿಸುವುದು

ವಿಶೇಷ ಆರ್ಥಿಕ ವಲಯ (SEZ) ದ ಈ ಕೆಳಗಿನವುಗಳಲ್ಲಿ ಯಾವುದು ಉದ್ದೇಶವಾಗಿಲ್ಲ
ಎ) ಕೃಷಿ ಹಾಗೂ ಕೈಗಾರಿಕೆಯನ್ನು ಉತ್ತೇಜಿಸುವುದು,  ಬಿ) ಸರಕು ಹಾಗೂ ಸೇವೆಗಳ ನಿರ್ಯಾತ ಉತ್ತೇಜಿಸುವುದು,  ಸಿ) ಪೂರಕ ಆರ್ಥಿಕ ಚಟುವಟಿಕೆಗಳನ್ನು ಸೃಷ್ಟಿಸುವುದು,  ಡಿ) ಮೂಲ ಸೌಕರ್ಯ ಅಭಿವೃದ್ಧಿಗೊಳಿಸುವುದು

WTO ಈ ಸ್ಥಾನದಲ್ಲಿ ಬಂದಿದೆ
ಎ) UNCTAD,  ಬಿ) GATT,  ಸಿ) ITO, ಡಿ) UNO

ಜನಸಂಖ್ಯಾತ್ಮಕ ಲಾಭ ಇದರಲ್ಲಿ ಪ್ರತಿಬಿಂಬಿಸಿದೆ
ಎ) ಹೆಚ್ಚುತ್ತಿರುವ ಕಾರ್ಮಿಕ ಸಮೂಹ,  ಬಿ) ಹೆಚ್ಚುತ್ತಿರುವ ವಯಸ್ಸಾದವರ ಸಮೂಹ,  ಸಿ) ಹೆಚ್ಚುತ್ತಿರುವ ಹದಿಹರೆಯದ ವಯಸ್ಸಿನವರ ಸಮೂಹ,  ಡಿ) ಹೆಚ್ಚುತ್ತಿರುವ ಮಕ್ಕಳ ಜನಸಂಖ್ಯೆ

ಹನ್ನೊಂದನೆ ಪಂಚವಾರ್ಷಿಕ ಯೋಜನೆಯ ಅವಧಿ
ಎ) 2005-2010,  ಬಿ) 2006-2011,  ಸಿ) 2007-2012,  ಡಿ) 2008-2013

ಪರ್ಯಾಯ ಆರ್ಥಿಕ ವ್ಯವಸ್ಥೆಯು ಇದಕ್ಕೆ ಸಂಬಂಧಿಸಿದೆ
ಎ) ಅರ್ಥವ್ಯವಸ್ಥೆಯು ಬಿಳಿ ಹಣದ ಮೂಲಕ ಕಾರ್ಯ ನಿರ್ವಹಿಸುವುದು,  ಬಿ) ಅರ್ಥವ್ಯವಸ್ಥೆಯು ಕಪ್ಪು ಹಣದ ಮೂಲಕ ಕಾರ್ಯನಿರ್ವಹಿಸುವುದು,  ಸಿ) ಅರ್ಥವ್ಯವಸ್ಥೆಯು ಹಣವಿಲ್ಲದೆ ಕಾರ್ಯನಿರ್ವಹಿಸುವುದು,  ಡಿ) ಅರ್ಥವ್ಯವಸ್ಥೆಯು ನ್ಯಾಯಬದ್ಧ ವಲಯದ ಮೂಲಕ ಕಾರ್ಯ ನಿರ್ವಹಿಸುವುದು
ಇಂದಿನ ಪ್ರಧಾನಿ ಡಾ||ಮನಮೋಹನ್ ಸಿಂಗ್ ಅವರು ಹಿಂದೆ ಯಾರ ಸರಕಾರದಲ್ಲಿ ಅರ್ಥ ಸಚಿವರಾಗಿದ್ದರು
ಎ) ಪಂಡಿತ್ ನೆಹರು,  ಬಿ) ಇಂದಿರಾಗಾಂಧಿ,  ಸಿ) ಪಿ.ವ್ಹಿ.ನರಸಿಂಹರಾವ್,  ಡಿ) ವ್ಹಿ.ಪಿ.ಸಿಂಗ್

ಸಮಾಜವಾದ, ಜಾತ್ಯಾತೀತತೆ, ಏಕತೆ ಮತ್ತು ರಾಷ್ಟ್ರೀಯತೆ ಈ ಪದಗಳನ್ನು ಸಂವಿಧಾನದ ಈ ತಿದ್ದುಪಡಿಯ ಮೂಲಕ ಸೇರಿಸಲಾಯಿತು
ಎ) 44ನೇ ತಿದ್ದುಪಡಿ,  ಬಿ) 42ನೇ ತಿದ್ದುಪಡಿ,  ಸಿ) 52ನೇ ತಿದ್ದುಪಡಿ,  ಡಿ) ಇತ್ತೀಚಿನ ತಿದ್ದುಪಡಿ

ಈ ಕೆಳಗಿನವುಗಳಲ್ಲಿ ಯಾವ ಮೂಲಭೂತ ಹಕ್ಕನ್ನು ಸ್ಥಗಿತಗೊಳಿಸಲಾಯಿತು
ಎ) ಸಂವಿಧಾನಾತ್ಮಕ ಪರಿಹಾರಗಳ ಹಕ್ಕು,  ಬಿ) ಆಸ್ತಿಯ ಹಕ್ಕು,  ಸಿ) ಧಾರ್ಮಿಕ ಹಕ್ಕು,  ಡಿ) ಶೋಷಣೆಯ ವಿರುದ್ಧದ ಹಕ್ಕು,  ಡಿ) ಶೋಷಣೆಯ ವಿರುದ್ಧದ ಹಕ್ಕು

ಚಾರ್ಲ್ಸ್ ವುಡ್ಡನು ಈ ಇಲಾಖೆಯನ್ನು ರಚಿಸಲು ಶಿಫಾರಸ್ಸು ಮಾಡಿದನು
ಎ) ಆರಕ್ಷಕ ಇಲಾಖೆ,  ಬಿ) ಕಂದಾಯ ಇಲಾಖೆ,  ಸಿ) ಸಾರ್ವಜನಿಕ ಶಿಕ್ಷಣ,  ಡಿ) ಲೋಕೋಪಯೋಗಿ